ನರೇಂದ್ರ ’ಮೋದಿ ಮತ್ತೋಮ್ಮೆ-2019’ ಎಂಬ ಮಾತು ಹೆಚ್ಚಾಗಿ ಕೇಳಿ ಬರಲು ಕಾರಣ ನಿಮಗೆ ಗೊತ್ತೆ?

ಭಾರತ ದೇಶ ಹಾಗೂ ವಿಶ್ವ ಕಂಡ ಅತ್ಯಂತ ಪ್ರಭಾವಿ ಹಾಗೂ ಯಶಸ್ವಿ ನಾಯಕ ಪ್ರಧಾನಿ ನರೇಂದ್ರ ಮೋದಿ. ಭಾರತದ ಯಾವ ಪ್ರಧಾನಿಗೂ ಸಿಗದ ಗೌರವ ಪ್ರಧಾನಿ ನರೇಂದ್ರ ಮೋದಿಗೆ ವಿಶ್ವದ್ಯಾಂತ ದೊರಕಿದೆ. ಯುವಕರ ಪಾಲಿನ ನೆಚ್ಚಿನ ಜನನಾಯಕರಾಗಿರುವ ಮೋದಿಯವರು ಮತ್ತೋಮ್ಮೆ 2019 ರಲ್ಲಿ ದೆಹಲಿಯ ಗದ್ದುಗೆ ಏರಬೇಕೆಂದು ದೇಶವ್ಯಾಪಿ ಕೇಳಿಬರುತ್ತಿರುವ ಮಾತು. ಈ ಮಾತು ಕೇಳಿ ಬರಲು ಪ್ರಮುಖ ಕಾರಣ ಮೋದಿಜಿಯವರು ಆಡಳಿತಾತ್ಮಕ ಸುಧಾರಣೆಗಳು ದೇಶದ ಇತಿಹಾಸದಲ್ಲಿ ಹೊಸ ಕ್ರಾಂತಿಯನ್ನೆ ಮೂಡಿಸಿದೆ.
ಸರಕು ಮತ್ತು ಸೇವಾ ತೆರಿಗೆ , ನೋಟು ಬ್ಯಾನ್ ನಂತಹ ಕಠಿಣ ಸವಾಲುಗಳನ್ನೊಳಗೊಂಡ ಯೋಜನೆಗಳನ್ನು ಜಾರಿಗೊಳಿಸಿ ಯಶಸ್ಸನ್ನು ಕಂಡಿರುವ  ನರೇಂದ್ರ ಮೋದಿ, ದೇಶದ ಆಭಿವೃಧ್ದಿಗಾಗಿ ದೂರದೃಷ್ಟಿ ಹೊಂದಿರುವ ಕಠಿಣ ಯೋಜನೆಗಳನ್ನು ಕೈಗೊಂಡಿರುವುದೆ ಅವರ ಪ್ರಖ್ಯಾತಿಗೆ ಕಾರಣವಾಗಿದೆ.
ವಿರೋಧಿಗಳ ವಿರೋಧದ ಮಧ್ಯೆಯು ಯಶಸ್ವಿಯಾಗಿ 4 ವರ್ಷಗಳನ್ನು ಪೂರೈಸಿರುವ ಮೋದಿ ಸರಕಾರ 5ನೇ ವರ್ಷಕ್ಕೆ ದಾಪುಗಲಿಟ್ಟು ಉತ್ತಮವಾಗಿ ಮುನ್ನಡೆಯುತ್ತಿರುವುದು ಅವರ ಯಶಸ್ವಿ ಆಡಳಿತಕ್ಕೆ ಮತ್ತೊಂದು ಗರಿ.
ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಭೇಟಿ ನೀಡಿರುವ ಮೋದಿಯವರು ರಾಷ್ಟ್ರಗಳ ನಡುವೆ ಸ್ನೇಹ-ಸಂಬಂಧವನ್ನು ಕಾಪಾಡಿಕೊಳ್ಳುವುದರ ಜೊತೆಗೆ, ದೇಶದಲ್ಲಿ ಬಂಡವಾಳವನ್ನು ಹೂಡಿಕೆ ಮಾಡಲು ಪೂರಕವಾದ ವಾತವರಣವನ್ನು ನಿರ್ಮಿಸಲು ಹಗಲಿರುಳು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದಾರೆ.
ಮಹಿಳಾ ವರ್ಗಕ್ಕೆ ವಿಶೇಷ ಸ್ಥಾನಮಾನವನ್ನು ನೀಡುತ್ತಿರುವುದರ ಜೊತೆಗೆ ಬೇಟಿ ಬಚಾವೊ ಬೇಟಿ ಪಢಾವೊ, ನಿರ್ಭಯ, ಮುದ್ರಾದಂತಹ ಯೋಜನೆಗಳು ವಿಶೇಷವಾಗಿ ಮಹಿಳಾ ಸಬಲೀಕರಣಕ್ಕೆ ಕೈಗೊಂಡಿರುವ ಪ್ರಮುಖ ಯೋಜನೆಗಳು.
ಜನೌಷಧಿ ಕೇಂದ್ರಗಳನ್ನು ಸ್ಥಾಪಿಸುವ ಮುಖಾಂತರ ರೋಗಿಗಳ ಮನದಲ್ಲಿ ಮಂದಹಾಸ ಮೂಡಿಸಿದ ಕೀರ್ತಿ ಮೋದಿಗೆ ಸಲ್ಲುತ್ತದೆ.
ಸ್ವಚ್ಚ ಭಾರತ್ ಅಭಿಯಾನ್, ಜನ್-ಧನ್,  ಮೇಕ್ ಇನ್ ಇಂಡಿಯಾ, ಪ್ರಧಾನ್ ಮಂತ್ರಿ ಅವಾಜ್ ಯೋಜನ, ಒನ್ ರ‍್ಯಾಂಕ್ ಒನ್ ಪೆನ್ಸನ್ ನಂತಹ ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. Govt Jobs In Karnataka, Government Jobs In Karnataka
ಸರಿ ಸುಮಾರು 70 ವರ್ಷಗಳ ಕಾಲ ಕಾಂಗ್ರೇಸ್ ಆಡಳಿತದಿಂದ ಬೇಸತ್ತ ಭಾರತೀಯ ಜನತೆ 2014ರಲ್ಲಿ ಮೋದಿಯವರನ್ನು ಬೆಂಬಲಿಸಿ ಜನತೆಯ ಬಾಳಿನಲ್ಲಿ ಆಶಾಕಿರಣ ಮೂಡಿದೆ. ತುಕ್ಕು ಹಿಡಿದಂತಾಗಿದ್ದ ಆಡಳಿತ ವ್ಯವಸ್ಥೆಯನ್ನು ಮೋದಿಯವರು ಕ್ಷೀಪ್ರಗೊಳಿಸಿದ್ದಾರೆ. ಮತ್ತಷ್ಟು ಕ್ಷೀಪ್ರಗೊಳಿಸಲು ಇಂತಹ ಯಶಸ್ವಿ ನಾಯಕನನ್ನು 2019ರಲ್ಲಿ ಮತ್ತೋಮ್ಮೆ ಬೆಂಬಲಿಸಿ ಭಾರತ ’ಆಭಿವೃದ್ಧಿ ಹೊಂದಿದ’ ರಾಷ್ಟ್ರವನ್ನಾಗಿಸಲು ಭಾರತದ ಜನತೆ ಮುಂದಾಗಿದ್ದರೆ. ಭಾರತೀಯರು ಇಂತಹ ಮಹಾನ್ ನಾಯಕನನ್ನು ಬೆಂಬಲಿಸಿ "ಮತ್ತೋಮ್ಮೆ ಮೋದಿ-2019" ಎಂಬ ಜೈಕಾರ ಮೊಳಗಿಸಿ.

Comments

Post a Comment