ಬ್ರೇಕಿಂಗ್ ನ್ಯೂಸ್: ’ಅವಿಶ್ವಾಸ ಅಗ್ನಿಪರೀಕ್ಷೆ’ ಯಲ್ಲಿ ಯಶಸ್ವಿಯಾಗಿ ಜಯಿಸಲಿರುವ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ!!!!


ಸುಮಾರು ಹದಿನೈದು ವರ್ಷಗಳ ನಂತರ ಆಡಳಿತ ಪಕ್ಷ ಬಿ.ಜೆ.ಪಿ ಅವಿಶ್ವಾಸದ ಅಗ್ನಿಪರೀಕ್ಷೆಯನ್ನು ಸಂಸತ್ತಿನಲ್ಲಿ ಇಂದು ಎದುರಿಸಲಿದೆ. ಸರ್ಕಾರದ ಕಾರ್ಯವೈಖರಿ ತೃಪ್ತಿದಾಯಕವಾಗಿಲ್ಲ, ಬಡಜನರ ಸುಧಾರಣೆಯಾಗಿಲ್ಲ ಎಂಬ ವಾದವನ್ನು ಮುಂದಿಡುತ್ತಾ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಾಯದ ಚರ್ಚೆಗೆ ಪ್ರಸ್ತಾವನೆ ಸಲ್ಲಿಸಿದ್ದು. ಲೋಕಸಭಾ ಸ್ಪೀಕರ್ ಸುಮಿತ್ರ ಮಹಾಜನ್ ಇದಕ್ಕೆ ಒಪ್ಪಿಗೆಯನ್ನು ಸೂಚಿಸಿದ್ದು. ಅದರಂತೆ ಇಂದು ಅವಿಶ್ವಾಸ ನಿರ್ಣಯದ ಮತಯಾಚನೆ ನಡೆಯಲಿದೆ.

ಅದರೆ 545 ಸದಸ್ಯ ಬಲವಿರುವ ಲೋಕಸಭೆಯಲ್ಲಿ 9 ಸ್ಥಾನಗಳ ತೆರವಿನಿಂದ ಸದ್ಯ ಒಟ್ಟು ಸದಸ್ಯರ ಬಲ 536 ಆಗಿದೆ. ಬಿ.ಜೆ.ಪಿ ನೇತೃತ್ವದ ಎನ್.ಡಿ.ಎ ಮಿತ್ರ ಪಕ್ಷ 314 ಸದಸ್ಯ ಬಲವನ್ನು ಹೊಂದಿದೆ. ಇದರಲ್ಲಿ ಬಿ.ಜೆ.ಪಿ 274 ಸ್ಥಾನಗಳನ್ನು ಹೊಂದಿದೆ. ಸದ್ಯ 270 ಸದಸ್ಯರ ಮತ ಅಗತ್ಯವಿದ್ದು, ನರೇಂದ್ರ ಮೋದಿ ಸರಕಾರ ’ಅವಿಶ್ವಾಸ ಅಗ್ನಿಪರೀಕ್ಷೆ’ ಯಶಸಿಯಾಗಿ ಜಯಿಸಿ, ವಿರೋಧ ಪಕ್ಷಗಳಿಗೆ ಕಠಿಣ ಸಂದೇಶ ರವಾನಿಸಲಿದೆ.
ಭಾರತ ದೇಶವು  ನರೇಂದ್ರ ಮೋದಿಯವರ ನೇತೃತ್ವದಲ್ಲಿ ಗಮನಾರ್ಹ ಪ್ರಗತಿ ಸಾಧಿಸುತ್ತಿದ್ದರು, ವಿರೋಧ ಪಕ್ಷಗಳು ತಮ್ಮ ರಾಜಕೀಯ ಸ್ಥಾನವನ್ನು ಉಳಿಸಿಕೊಳ್ಳಲು ಇಂತಹ ಪ್ರಯತ್ನವನ್ನು ಮಾಡುತ್ತಿವೆ 

Comments

Post a Comment