ಬ್ರೇಕಿಂಗ್ ನ್ಯೂಸ್: ದೇಶ ವಾಸಿಗಳಿಗೆ ಸಿಹಿ ಸುದ್ದಿ ನೀಡಿದ ಮೋದಿ ಸರ್ಕಾರ, ಟಿವಿ, ರೆಫ್ರಿಜರೇಟರ್ ಮತ್ತಷ್ಟು ಅಗ್ಗ , ಮಹಿಳೆಯರಿಗೆ ಶುಭ ಸುದ್ದಿ ನೀಡಿದ ಸರ್ಕಾರ.


ಗ್ರಾಹಕರಿಗೆ ಮಾನ್ಸೂನ್ ಕೊಡುಗೆಯಲ್ಲಿ ಕೇಂದ್ರ ಸರ್ಕಾರವು ಜಿ.ಎಸ್.ಟಿ ವ್ಯಾಪ್ತಿಯಲ್ಲಿರುವ ಹಲವಾರು ಸರಕುಗಳ ತೆರಿಗೆಯನ್ನು ಮತ್ತಷ್ಟು ಕಡಿತಗೊಳಿಸಿದೆ. ನಿನ್ನೆ ನಡೆದ ಜಿ.ಎಸ್.ಟಿ ಕೌನ್ಸಿಲ್ ಸಭೆಯಲ್ಲಿ ಟಿವಿ, ವಾಷಿಂಗ್ ಮೆಷಿನ್ ಮತ್ತು ರೆಫ್ರಿಜರೇಟರ್ ಗಳಂತಹ ಹಲವಾರು ವಸ್ತುಗಳ ಮೇಲಿನ ತೆರಿಗೆಗಳ ದರವನ್ನು ಕಡಿಮೆಗೊಳಿಸಲಾಗಿದೆ. ಮಾತ್ರವಲ್ಲದೆ ವರ್ಷಗಳ ಬೇಡಿಕೆಯಾದ ಸ್ಯಾನಿಟರಿ ನ್ಯಾಪ್‌ಕಿನ್ಸ್‌ನ್ನು ಜಿ.ಎಸ್.ಟಿ ವ್ಯಾಪ್ತಿಯಿಂದ ಹೊರತರುವ ಮೂಲಕ ಮಹಿಳೆಯರಿಗೆ ಶುಭ ಸುದ್ದಿ ನೀಡಿದೆ.  ಪರಿಷ್ಕ್ರತ ದರಗಳು ಮುಂದಿನ ಜುಲೈ 27 ರಿಂದ ಜಾರಿಗೆ ಬರಲಿದೆ.
28 ನೇ ಜಿ.ಎಸ್.ಟಿ ಕೌನ್ಸಿಲ್ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳು ವಾಷಿಂಗ್ ಮೆಷಿನ್, ರೆಫ್ರಿಜರೇಟರ್, ಟಿ.ವಿ, ವಿಡಿಯೋ ಗೇಮ್ಸ್ , ವ್ಯಾಕ್ಯೂಮ್ ಕ್ಲೀನರ್ಗಳು, ವಾಟರ್ ಹೀಟರ್ ಮುಂತಾದ 17 ಸರಕುಗಳ ದರಗಳನ್ನು ಶೇ 28 ರಿಂದ ಶೇ 18 ಕ್ಕೆ ಇಳಿಸಲಾಗಿದೆ. ಸುಮಾರು 27 ಇಂಚಿನ ಟಿ.ವಿಗಳಿಗೆ ಶೇ 18 ಜಿ.ಎಸ್.ಟಿ  ಅನ್ವಯವಾಗಲಿದೆ.

ಜಿ.ಎಸ್.ಟಿ ಸರಕು ಮತ್ತು ದರಗಳ ಪಟ್ಟಿ

Comments