ಪ್ರಧಾನಿ ಮೋದಿಯವರ ಕಾರ್ಯವೈಖರಿಗೆ ಮತ್ತೊಂದು ಜಯದ ಗರಿ; ಮೋದಿಯವರ ಖಡಕ್ ಆಡಳಿತಕ್ಕೆ ಬೆಚ್ಚಿಬಿದ್ದು ಭಾರತಕ್ಕೆ ವಾಪಸ್ಸು ಬರಲು ತಯಾರಾದ ಆ ವ್ಯಕ್ತಿ ಯಾರು ಗೊತ್ತೆ?

ಭಾರತದಲ್ಲಿ ಸುಮಾರು 9990 ಕೋಟಿ ಸಾಲ ಮಾಡಿ ಪಂಗನಾಮ ಹಾಕಿ ಓಡಿಹೋಗಿದ್ದ ವಿಜಯ ಮಲ್ಯ ಮತ್ತೇ ಭಾರತಕ್ಕೆ ವಾಪಸ್ಸಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೌದು ಈ ಕುರಿತಂತೆ ಸ್ವತಃ ವಿಜಯ ಮಲ್ಯ ಅವರೇ ಭಾರತಕ್ಕೆ ಮರಳುವ ಬಗ್ಗೆ ಮಾತಾಡಿದ್ದಾರೆ!! 17 ಬ್ಯಾಂಕುಗಳಲ್ಲಿ 9990 ಕೋಟಿ ರೂಪಾಯಿ ಸಾಲ ಮಾಡಿದ ಮಲ್ಯ, ಮೋದಿ ಪ್ರಧಾನಿಯಾದ ಮೇಲೆ ಅನೇಕ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ನೋಡಿ 2016ರಲ್ಲಿ ದೇಶಬಿಟ್ಟು ಪಲಾಯನ ಮಾಡಿದ್ದ. ಈಗ ಅದೇ ಕಠಿಣ ನಿರ್ಧಾರಗಳಿಗೆ ಬೆಂಡಾಗಿ ಭಾರತಕ್ಕೆ ಮರಳು ಆಶಯ ವ್ಯಕ್ತ ಪಡಿಸಿದ್ದಾರೆ.

ಇತ್ತೀಚೆಗೆ ಭಾರತದ ಸರ್ಕಾರದ ಕೋರಿಕೆಯನ್ವಯ ಬ್ರಿಟನ್ ಸರ್ಕಾರ ಮಲ್ಯನ ವಂಚನೆಯನ್ನು ಅರಿತುಕೊಂಡು ಭಾರತದ ಬ್ಯಾಂಕ್ ಗಳಿಗೆ ಬ್ರಿಟನ್ ನಲ್ಲಿರುವ ಮಲ್ಯನ ಆಸ್ತಿಯನ್ನು ಮುಟ್ಟುಗೋಲು ಹಾಕಲು ಅನುಮತಿ ಕೊಟ್ಟಿತ್ತು. ತದನಂತರ ಬ್ರಿಟನ್ನಿನಲ್ಲಿರುವ ಮಲ್ಯನ ಆಸ್ತಿಯನ್ನು ಮುಟ್ಟುಗೋಲು ಹಾಕಲಾಗಿದೆ. ಇದರಿಂದ ಬರೊಬ್ಬರಿ 963 ಕೋಟಿ ರೂಪಾಯಿಗಳನ್ನು ಎಸ್ ಬಿಐ ಬ್ಯಾಂಕ್ ಮರು ಪಡೆದುಕೊಂಡಿದೆ. ಬ್ರಿಟನ್ ಸರ್ಕಾರದ ಅನುಮತಿ ಮೇರೆಗೆ ಬ್ರಿಟನ್ನಿನಲ್ಲಿರುವ ಮಲ್ಯನ ಆಸ್ತಿಯನ್ನು ಮುಟ್ಟುಗೋಲು ಹಾಕಿ ಹರಾಜು ಹಾಕಿದಾಗ 963 ಕೋಟಿ ರೂಪಾಯಿ ಎಸ್ ಬಿ ಬ್ಯಾಂಕಿನ ಹಣ ಮರುಪಾವತಿಯಾದಂತಿದೆ. ಈ ಎಲ್ಲಾ ಕಠಿಣ ಕ್ರಮಗಳಿಗೆ ಬೆದರಿದ ವಿಜಯ ಮಲ್ಯ ಇದೀಗ ಭಾರತಕ್ಕೆ ಮರಳಲು ಸಿದ್ಧರಾಗಿದ್ದಾರೆ.
ವಿಜಯ ಮಲ್ಯ ಭಾರತಕ್ಕೆ ಮರಳುವ ಇಂಗಿತ ವ್ಯಕ್ತ ಪಡಿಸಿದ್ದೇಕೆ ಗೊತ್ತಾ??

ಸಾಲ ಮಾಡಿ ದೇಶ ಬಿಟ್ಟು ಹೋಗಿರುವವರಿಗೆ ಹಾಗೂ ಹೋಗಲು ಪ್ರಯತ್ನಿಸುವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಕಠಿಣ ಕಾನೂನು ಕ್ರಮಗಳನ್ನು ಜರುಗಿಸಿದ್ದಾರೆ. ಈ ಕಾನೂನಿಂದ ತಪ್ಪಿಸಿಕೊಳ್ಳುವುದು ಸುಲಭದ ಮಾತಲ್ಲ ಈ ಕಾರಣದಿಂದಾಗಿ ವಿಜಯ್ ಮಲ್ಯ ದೇಶಕ್ಕೆ ವಾಪಸ್ಸಾಗುವ ಅಲೋಚನೆ ಮಾಡಿದ್ದಾರೆ.

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದ ಕಠಿಣ ಕಾನೂನಿನಿಂದ ತನ್ನ ಇಡೀ ಆಸ್ತಿ ಕೈತಪ್ಪಿ ಹೋಗಬಹುದು ಎಂದು ಹೆದರಿದ ವಿಜಯ ಮಲ್ಯ ನಾನು ಭಾರತಕ್ಕೆ ವಾಪಸ್ಸಾಗುತ್ತೇನೆ ಎಂದು ಹೇಳಿದ್ದಾರೆ. ಇಷ್ಟು ದಿನ ತಾನು ಮಾಡಿದ ಸಾಲದ ಕುರಿತು ಮಾತಾನಡದೇ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದ ವಿಜಯ ಮಲ್ಯ ಇದೀಗ ಪ್ರಧಾನಿ ಮೋದಿಯವರ ಕಾರ್ಯವೈಖರಿಗೆ ಅಕ್ಷರಶಃ ಬೆಚ್ಚಿಬಿದ್ದಿದ್ದಾನೆ. ಭಾರತ ಸರ್ಕಾರದೊಂದಿಗೆ ಬ್ರಿಟನ್ ಸರ್ಕಾರ ಯಾವಾಗ ಕೈಜೋಡಿಸಿತೋ ಆಗಲೇ ವಿಜಯ ಮಲ್ಯ ತಣ್ಣಗಾಗಿದ್ದಾನೆ. ಪ್ರಧಾನಿ ಮೋದಿಯವರ ದೃಢ ನಿರ್ಧಾರಕ್ಕೆ ಮಣಿದ ವಿಜಯ ಮಲ್ಯ ಹೆದರಿ ಇದೀಗ ತಾನು ಭಾರತಕ್ಕೆ ಮರಳುವ ಆಶಯವನ್ನು ವ್ಯಕ್ತಪಡಿಸಿದ್ದಾನೆ!!

ಇಡೀ ದೇಶದ ಜನತೆಗೆ ಮಂಕುಬೂದಿ ಎರಚಿ, ಈ ದೇಶವನ್ನು ಹೆಕ್ಕಿ ತಿಂದು ಬರ್ಬಾದ್ ಮಾಡಿದ ಕಾಂಗ್ರೆಸ್ ಪಕ್ಷ ವಿಜಯ ಮಲ್ಯ ಪಲಾಯನವಾಗಿದ್ದನ್ನೇ ಇಟ್ಟುಕೊಂಡು ಪ್ರಧಾನಿ ಮೋದಿ ವಿರುದ್ಧ ಬೇಕಾಬಿಟ್ಟಿಯಾಗಿ ಮಾತಾಡಿದ್ದರು. ವಿಜಯ ಮಲ್ಯ 2016ರಲ್ಲಿ ದೇಶಬಿಟ್ಟು ಪಲಾಯನ ಮಾಡಿದ್ದನ್ನೇ ಗಾಳವನ್ನಾಗಿ ಬಳಸಿಕೊಂಡ ವಿರೋಧಿಗಳು ಪ್ರಧಾನಿ ಮೋದಿಯವರನ್ನು ತುಳಿಯಲು ಪ್ರಯತ್ನಿಸಿದ್ದರು. ಈ ಕಾಂಗ್ರೆಸ್ಸಿಗರು ಪ್ರಧಾನಿ ಮೋದಿಯವರ ಕಾರ್ಯವೈಖರಿಯ ಕುರಿತಂತೆ ಎಂದು ಮಾತಾಡದೇ ಸುಖಾ ಸುಮ್ಮನೆ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬಂದಿದ್ದರು. ಈಗ ವಿಜಯ ಮಲ್ಯ ಮೋದಿಯವರ ಕಠಿಣ ಕ್ರಮಕ್ಕೆ ಹೆದರಿ ಭಾರತಕ್ಕೆ ಮರಳಲು ಸಿದ್ಧರಾಗಿದ್ದಾರೆ. ಇದರಿಂದ ವಿರೋಧಿಗಳಿಗೆ ತೀವ್ರ ಮುಖಭಂಗವಾಗಿದೆ!!


Comments