ಬಿಗ್ ಬ್ರೇಕಿಂಗ್ ನ್ಯೂಸ್: ರಾಜ್ಯದ ಬಜೆಟ್ ಯಾರಿಗೆ ಸಿಹಿ; ಯಾರಿಗೆ ಕಹಿ? ಸಾಲಮನ್ನಾ ಮಾಡುವ ಮೂಲಕ "ಮಣ್ಣಿನ ಮಗ" ಎನಿಸಿಕೊಂಡರ ಕುಮಾರಣ್ಣ?

ರಾಜ್ಯದ ಬಹುನೀರಿಕ್ಷಿತ ಅಯವ್ಯಯವನ್ನು ಕುಮಾರಸ್ವಾಮಿಯವರು ಮಂಡಿಸುತ್ತಿದ್ದಾರೆ. ಕಳೆದ ಬಜೆಟ್ ಗಿಂತ ಈ ಬಾರಿಯ ಬಜೆಟ್ ಬಹಳಷ್ಟು ಪ್ರಮುಖ್ಯತೆಯನ್ನು ಪಡೆದಿದೆ. ಪ್ರಸ್ತುತ ವರ್ಷದ ಬಜೆಟ್ ಗಾತ್ರ ಸುಮಾರು 2 ಲಕ್ಷ 18 ಸಾವಿರದ 734 ಕೋಟಿ ರೂಪಾಯಿಯ ಬಜೆಟ್ ಇದಾಗಿದೆ.
ರಾಜ್ಯದಲ್ಲಿ ಇಸ್ರೇಲ್ ಮಾದರಿಯ ಕೃಷಿಯನ್ನು ಆಳವಡಿಸುತ್ತಿದ್ದು ಇದಕ್ಕಾಗಿ 150 ಕೋಟಿ ಮೀಸಲಿರಿಸಲಾಗಿದೆ.
ನೀರಿಕ್ಷೆಯಂತೆ ಪ್ರತಿ ರೈತ ಕುಟುಂಬದ 2 ಲಕ್ಷ ರೂಪಾಯಿ ಸಾಲಮನ್ನಾ ಮಾಡಲಾಗುವುದು ಎಂದು ಬಜೆಟ್ ನಲ್ಲಿ ಘೋಷಿಸಲಾಗಿದೆ. ಸಿದ್ದರಾಮಯ್ಯನವರು ಜಾರಿಗೆ ತಂದ್ದಿದ್ದ ಅನ್ನ ಭಾಗ್ಯ, ಕ್ಷೀರ ಭಾಗ್ಯಗಳನ್ನೊಳಗೊಂಡಂತೆ ಎಲ್ಲಾ ಭಾಗ್ಯಗಳನ್ನು ಮುಂದುವರಿಸಲಾಗುತ್ತದೆ ಎಂದು ಬಜೆಟ್ ನಲ್ಲಿ ಘೋಷಿಸಲಾಗಿದೆ.


ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಸೆಸ್ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಪೆಟ್ರೋಲ್ ಹಾಗೂ ಡೀಸೆಲ್ ರಾಜ್ಯದಲ್ಲಿ ತುಟ್ಟಿಯಾಗಲಾಗಿದೆ. ಪ್ರತಿ ಯುನಿಟ್ ವಿದ್ಯುತ್ ಗೆ 20ಪೈಸೆ ಹೆಚ್ಚಳವಾಗಲಿದೆ.
ಮದ್ಯ ಪ್ರಿಯರಿಗೆ ಶಾಕ್ ಕೊಟ್ಟಿರುವ ಮುಖ್ಯಮಂತ್ರಿಗಳು ಮದ್ಯದ ಮೇಲಿನ ತೆರಿಗೆಯನ್ನು ಹೆಚ್ಚಿಸಿದ್ದಾರೆ.

Comments