ವಿದೇಶ ಪ್ರವಾಸಕ್ಕೆ ವಿಭಿನ್ನ ಆಯಾಮ ಕೊಟ್ಟ ವಿಶ್ವ ನಾಯಕ ಮೋದಿಯವರ ವಿದೇಶಾಂಗ ನೀತಿಯ ಬಗ್ಗೆ ಕೇಳಿದ್ರೆ ವಿರೋಧಿಗಳು ಬೆಚ್ಚಿ ಬೀಳ್ತಾರೆ!!!!
ಭಾರತದ ಹೆಮ್ಮೆಯ ಪ್ರಧಾನಿ, ವಿಶ್ವ ನಾಯಕ ನರೇಂದ್ರ ಮೋದಿ ಕಳೆದ ನಾಲ್ಕೂವರೆ ವರ್ಷದ ಆಡಳಿತಾವಧಿಯಲ್ಲಿ ಬಹುಶಃ ವಿಶ್ವದ ಎಲ್ಲಾ ಪ್ರಮುಖ ದೇಶಗಳಿಗೆ ಭೇಟಿ ನೀಡಿರುವ ಭಾರತದ ಏಕೈಕ ಪ್ರಧಾನಮಂತ್ರಿ. ವಿದೇಶ ಪ್ರವಾಸದ ಕುರಿತಂತೆ ಎದ್ದ ಪ್ರಶ್ನೆಗಳಷ್ಟು ಮತ್ಯಾವುದನ್ನೂ ವಿರೋಧಿಗಳು ಕೇಳಿಲ್ಲ. ವಿರೋಧಿಗಳ ಮನಸ್ಸಿನಲ್ಲಿ ಉಂಟಾಗಿರುವ ಪ್ರಶ್ನೆಗಳೇ ಮೋದಿಯವರು ಅನ್ಯ ರಾಷ್ಟ್ರಗಳೊಂದಿಗೆ ಭಾರತವನ್ನು ಬೆಸೆಯುತ್ತಿರುವ ರೀತಿಯನ್ನು ಬಲವಾಗಿ ಬಿಂಬಿಸುತ್ತಿದೆ.
ಇತ್ತೀಚೆಗೆ ಬಿಡುಗಡೆಯಾದ ದಾಖಲೆಯ ಪ್ರಕಾರ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರವರು ತಮ್ಮ ಎರಡನೇ ಅವಧಿಯ ಮೊದಲ ನಾಲ್ಕು ವರ್ಷಗಳಲ್ಲಿ ಸುಮಾರು 131 ದಿನ ವಿದೇಶದಲ್ಲಿ ಕಳೆದಿದ್ದರು. ಒಟ್ಟು 38 ಪ್ರವಾಸಗಳನ್ನು ಮಾಡಿ 386.5 ಕೋಟಿ ರೂಪಾಯಿಯನ್ನು ಖರ್ಚು ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನಾಲ್ಕು ವರ್ಷಗಳ ಅವಧಿಯಲ್ಲಿ 155 ದಿನಗಳನ್ನು ವಿದೇಶದಲ್ಲಿ ಕಳೆದಿದ್ದು 43 ಪ್ರವಾಸಗಳಿಗೆ 387 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಎರಡೂ ಪ್ರಧಾನಿಗಳ ಪ್ರವಾಸದ ಖರ್ಚು ಹಾಗೂ ವಿದೇಶಗಳಲ್ಲಿ ಕಳೆದ ದಿನಗಳ ಮಧ್ಯೆ ಭಾರಿ ವ್ಯತ್ಯಾಸವೇನೂ ಇಲ್ಲ. ಅದರೆ ವಾರ್ಷಿಕವಾಗಿ ಪ್ರತಿ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ಪ್ರಸ್ತುತ ದಿನಗಳಲ್ಲಿ ಮೋದಿಯವರ ಪ್ರವಾಸ ವೆಚ್ಚ ಮಾತ್ರ ಮನಮೋಹನ್ ಸಿಂಗ್ ರವರ ಪ್ರವಾಸದ ವೆಚ್ಚದಷ್ಟೆ ಇರಲು ಕಾರಣವೇನು? ಈ ಮಾತನ್ನು ಪ್ರತಿಯೊಬ್ಬರು ಕೇಳಿಕೊಳ್ಳಬೇಕಾದ ಪ್ರಶ್ನೆ.
ಪ್ರಧಾನಿಯೊಬ್ಬರು ವಿದೇಶ ಪ್ರವಾಸ ಕೈಗೊಳ್ಳುವಾಗ ಕೇವಲ ಪ್ರಧಾನಿ ಮಾತ್ರ ತೆರಳುವುದಿಲ್ಲ. ಅವರ ಜೊತೆಯಲ್ಲಿ ಅಧಿಕಾರಿಗಳು, ಕೆಲವು ರಾಜಕಾರಣಿಗಳನ್ನು ಮತ್ತು ವಿಶೇಷವಾಗಿ ದೊಡ್ಡ ಸಂಖ್ಯೆಯಲ್ಲಿ ಪತ್ರಕರ್ತರನ್ನು ಕರೆದೊಯ್ಯುತ್ತಾರೆ ಅದರೆ ಪ್ರಧಾನಿಮಂತ್ರಿಗಳ ವಿದೇಶ ಪ್ರವಾಸದ ಸಂಧರ್ಭದಲ್ಲಿ ಪ್ರಧಾನಿಗಳ ಖರ್ಚನ್ನು ಆಯಾ ದೇಶಗಳು ನೋಡಿಕೊಳ್ಳುತ್ತಾವೆ. ಅದರೆ ಅವರ ಜೊತೆಯಲ್ಲಿ ತೆರಳುವ ಇತರೆ ಸಿಬ್ಬಂದಿಗಳ ಖರ್ಚನ್ನು ನಮ್ಮ ದೇಶವೆ ನೋಡಿಕೊಳ್ಳಬೇಕು. ಈ ಕುರಿತಾದ ಖರ್ಚಿಗೆ ನಮ್ಮ ಪ್ರಧಾನಿ ಮೋದಿಯವರು ಬ್ರೇಕ್ ಹಾಕುವ ಮುಖಾಂತರ ಕಡಿಮೆ ಖರ್ಚಿನಿಂದ ಹೆಚ್ಚು ಲಾಭವನ್ನು ದೇಶಕ್ಕೆ ತರುವ ಮೂಲಕ ದೇಶದ ಅಭಿವೃಧ್ದಿಗೆ ಬೇಕಾದ ಪೂರಕ ವಾತವರಣವನ್ನು ನಿರ್ಮಿಸುವಲ್ಲಿ ಮೋದಿಯವರು ಅಗ್ರಗಣ್ಯರಾಗಿದ್ದಾರೆ.
ಮೋದಿಯ ವಿದೇಶಿ ಪ್ರವಾಸದ ಬಗ್ಗೆ ವಿರೋಧಿಗಳು ತಮಗೆ ಮನಸ್ಸಿಗೆ ಬಂದಂತೆ ಮಾತಾಡುತ್ತಾರೆ ಅದರೆ ಅವರು ಸತ್ಯಾಂಶವನ್ನು ಯಾವತ್ತು ಜನರಿಗೆ ತಿಳಿಸುವುದಿಲ್ಲ. ಮೋದಿಯವರು ತಮ್ಮ ವಿದೇಶಿ ಪ್ರವಾಸದ ಸಂಧರ್ಭದಲ್ಲಿ ಅಧಿಕಾರಿಗಳು ಹಾಗೂ ಆ ದೇಶದ ನಾಯಕರ ಜೊತೆ ಸಭೆಗಳ ಮೇಲೆ ಸಭೆಗಳನ್ನು ನಡೆಸುತ್ತಾರೆ. ಮೋದಿಯವರು ವಿದೇಶಿ ಪ್ರವಾಸದ ಎಲ್ಲಾ ಕಾರ್ಯಕ್ರಮಗಳು ಮುಗಿದ ತಕ್ಷಣ ಮತ್ತೇ ತವರಿಗೆ ಮರಳುತ್ತಾರೆ. ದೇಶದಲ್ಲಿ ಮತ್ತೇ ಕೆಲಸವನ್ನು ಆರಂಭಿಸುತ್ತಾರೆ ವಿದೇಶಿ ಪ್ರವಾಸ ಮುಗಿಸಿ ಮರಳಿ ಬಂದಾಗ ರಜೆ ಪಡೆದು ವಿಶ್ರಾಂತಿಗೆ ತೆರಳುವುದಿಲ್ಲ.
ಮೋದಿ ಮತ್ತು ಮನಮೋಹನರ ವಿದೇಶಿ ಪ್ರವಾಸ ತುಲನೆ ಮಾಡಿ ನೋಡಿದಾಗ. ಸಿಂಗ್ ರವರು 2008 ರಲ್ಲಿ 4 ದಿನಗಳ ಕಾಲ ಚೀನಾ ಪ್ರವಾಸದಲ್ಲಿದ್ದಾಗ 10 ಸಭೆಗಳಲ್ಲಿ ಭಾಗವಹಿಸಿದ್ದರು. ಅದರೆ ಮೋದಿ ಮೊದಲ ಮೂರು ದಿನಗಳ ಪ್ರವಾಸದಲ್ಲೆ 25 ಸಭೆಗಳನ್ನು ನಡೆಸಿದ್ದರು. 2009 ರಲ್ಲಿ ಮನಮೋಹನ್ ಸಿಂಗ್ ರವರು ಅಮೆರಿಕಾ ಪ್ರವಾಸಕ್ಕೆ ಹೋಗಿದ್ದಾಗ ಒಂದು ನಗರಕ್ಕೆ ಭೇಟಿ ಕೊಟ್ಟಿದ್ದರು ಮತ್ತು 15 ಸಭೆಗಳಲ್ಲಿ ಭಾಗವಹಿಸಿದ್ದರು. ಇತ್ತೀಚೆಗೆ ನರೇಂದ್ರ ಮೋದಿಯವರು ಅಮೆರಿಕಾಕ್ಕೆ ಭೇಟಿ ಕೊಟ್ಟಾಗ ಎರಡು ನಗರಗಳನ್ನು ಸಂದರ್ಶಿಸಿ ಸುಮಾರು 33 ಸಭೆಗಳನ್ನು ನಡೆಸಿದ್ದರು. ಇದನ್ನು ಗಮನಿಸಿದಾಗ ಮೋದಿ ಹಾಗೂ ಮನಮೋಹನ್ ಸಿಂಗ್ ರವರಿಗೆ ಇರುವ ಸಾಮ್ಯತೆ ತಿಳಿಯುತ್ತದೆ. ಮೋದಿಯವರನ್ನು ಗಮನಿಸಿದಾಗ ಈ ಮನುಷ್ಯನೊಳಗೆ ಅಕ್ಷರಶಃ ವಿಚಿತ್ರವಾದ, ಊಹೆಗೆ ನಿಲುಕದ ಶಕ್ತಿಯೊಂದು ಹರಿಯುತ್ತಿದೆ ಎಂಬುದು ಪ್ರತಿಯೊಬ್ಬರಿಗೆ ಅರ್ಥವಾಗುತ್ತದೆ.
ಮನಮೋಹನ್ ಸಿಂಗ್ ರವರು ಅಮೆರಿಕಾದಂತಹ ಪ್ರಬಲ ರಾಷ್ಟ್ರಗಳಿಗೂ ಭೇಟಿ ಕೊಟ್ಟಾಗ ಅದು ನಮ್ಮ ದೇಶದ ರಾಷ್ಟೀಯ ಮಾಧ್ಯಮಗಳಲ್ಲು ಅಷ್ಟಾಗಿ ಚರ್ಚೆಯಾಗುತ್ತಿರಲಿಲ್ಲ. ಅದರೆ ಮೋದಿಯವರು ಯಾವುದೇ ಸಣ್ಣ ರಾಷ್ಟ್ರಗಳಿಗೂ ಭೇಟಿ ಕೊಟ್ಟಾರು ಅದು ರಾಷ್ಟ್ರೀಯ ಮಾಧ್ಯಮಗಳಲ್ಲಿ ಮಾತ್ರವಲ್ಲದೆ ವಿದೇಶಿ ಮಾಧ್ಯಮಗಳಲ್ಲಿ ಮೋದಿಯವರ ಭಾಷಣಗಳು ನೇರ ಪ್ರಸಾರದಲ್ಲಿ ಬಿತ್ತರಗೊಳ್ಳುತ್ತದೆ.
ಭಾರತವನ್ನು ಜಗತ್ತಿನ ಜನರು ಮೂಸಿಯೂ ನೋಡುವುದಿಲ್ಲ ಎಂಬ ಭಾವನೆ ಇದ್ದ ಕಾಲದಲ್ಲಿ ಮೋದಿಯವರು ತಮ್ಮ ವಾಕ್ ಚಾತುರ್ಯ ಹಾಗೂ ತಮ್ಮ ಕೆಲಸ ಕಾರ್ಯದ ವರ್ಚಸ್ಸನ್ನು ಬಳಸಿಕೊಂಡು ವಿದೇಶಿಗರು ಭಾರತವನ್ನು ಬಲು ಪ್ರೀತಿಯಿಂದ ನೋಡುವಂತಾಗಿದೆ. ಇಂದು ಕೂಡ ವಿಶ್ವದ ಆನೇಕ ರಾಷ್ಟಗಳು ಮೋದಿಯವರ ಆಗಮನವನ್ನು ಕೈಚಾಚಿ ಕರೆಯುತ್ತಿವೆ.
ಮೋದಿಯವರು ಅಮೆರಿಕಾ,ಜಪಾನ್,ರಷ್ಯಾ,ಇಂಗ್ಲೇಂಡ್ ಹಾಗೂ ಅರಬ್ ರಾಷ್ಟ್ರಗಳ ಜೊತೆಗೆ ಉತ್ತಮ ಸಂಬಂಧವನ್ನು ಹೊಂದುವ ಮುಖಾಂತರ ಭಾರತದ ಅಭಿವೃಧ್ದಿಗೆ ಭಧ್ರ ಬುನಾದಿಯ ಜೊತೆಗೆ ದೇಶದ ವಿದೇಶಾಂಗ ನೀತಿಯನ್ನು ಮತ್ತಷ್ಟು ಬಲಗೊಳಿಸುತ್ತಿದ್ದಾರೆ. ವಿರೋಧ ಪಕ್ಷಗಳು ಮೋದಿಯವರ ವಿದೇಶ ಪ್ರವಾಸದ ಬಗ್ಗೆ ಯಾವುದೇ ಸತ್ಯಸತ್ಯಾತೆಯನ್ನು ಜನತೆಗೆ ನೀಡುತ್ತಿಲ್ಲ. ಮೋದಿಯವರ ಆಡಳಿತ ಹಾಗೂ ಕಾರ್ಯವೈಖರಿಯನ್ನು ಗಮನಿಸಿರುವ ವಿರೋಧ ಪಕ್ಷಗಳು ಬೆಚ್ಚಿ ಬಿದ್ದಿವೆ. ಮಾತ್ರವಲ್ಲದೆ ಶತ್ರು ರಾಷ್ಟ್ರಗಳು ಕೂಡ ಇದರಿಂದ ಬೆಚ್ಚಿ ಬಿದ್ದು ಬಾಲ ಸುಟ್ಟ ಬೆಕ್ಕಿನಂತಾಗಿದೆ.





Comments
Post a Comment