ಬಿಗ್ ಬ್ರೇಕಿಂಗ್ ನ್ಯೂಸ್: ದಂಡ ಕಟ್ಟಿದ ರಾಜ್ಯಪಾಲರು! ಯಾವ ರಾಜ್ಯದ ರಾಜ್ಯಪಾಲರು ಗೊತ್ತೇ?


ರಾಜ್ಯಪಾಲರು ಪ್ರತಿ ರಾಜ್ಯದ ಪ್ರಥಮ ಪ್ರಜೆ. ಆದರೆ ಈಗ ರಾಜ್ಯಪಾಲರೆ ದಂಡ ಪಾವತಿಸಿದ್ದರೆ. ಅಷ್ಟಕ್ಕೂ ದಂಡ ಪಾವತಿಸಿದ ಆ ರಾಜ್ಯಪಾಲರು  ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳೂ ಆಗಿರುವ ಕೇರಳದ ಹಾಲಿ ರಾಜ್ಯಪಾಲ ಸದಾಶಿವಂ ಅವರು ಮಿತಿಮೀರಿದ ವೇಗದಲ್ಲಿ ಕಾರು ಚಾಲನೆ ಮಾಡಿದ ಕೇಸಲ್ಲಿ 400 ರು. ದಂಡ ಪಾವತಿ ಮಾಡಿದ್ದಾರೆ.

ಏ.7ರಂದು ವೆಲ್ಲಯಂಬಾಲರಂ- ಕೌಡಿದಾರ್‌ ಮಾರ್ಗದಲ್ಲಿ ರಾಜ್ಯಪಾಲರ ಕಾರು ನಿಗದಿತ ಮಿತಿಗಿಂತ ಹೆಚ್ಚಿನ ವೇಗದಲ್ಲಿ ಚಲಿಸಿತ್ತು. ಇದನ್ನು ಸ್ವಯಂಚಾಲಿತ ಯಂತ್ರ ಪತ್ತೆಹಚ್ಚಿತ್ತು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ರಾಜ್ಯಪಾಲರ ಕಚೇರಿಗೆ ನಿಯಮ ಉಲ್ಲಂಘನೆಗೆ ದಂಡ ಪಾವತಿಸುವಂತೆ ನೋಟಿಸ್‌ ಜಾರಿಯಾಗಿತ್ತು. ಘಟನೆ ನಡೆದಾಗ ತಾವು ಕಾರಿನಲ್ಲಿ ಇಲ್ಲದೇ ಇದ್ದರೂ, ಸದಾಶಿವಂ ಅವರು ತಮ್ಮ ಕಚೇರಿ ಮೂಲಕ 400 ರು. ದಂಡ ಪಾವತಿ ಮಾಡಿದ್ದಾರೆ.

Comments