ರೈತರ ಆತ್ಮಹತ್ಯೆಗೆ ಸಾಲಮನ್ನಾ ಒಂದೇ ಪರಿಹಾರವೇ?


ದೇಶ ವ್ಯಾಪಿ ರೈತರ ಆತ್ಮಹತ್ಯೆ ಸಂಖ್ಯೆ ಹೆಚ್ಚಾಗಿದೆ. ರೈತರ ಆತ್ಮಹತ್ಯೆಯು ಸರ್ಕಾರಗಳಿಗೆ ಬಹಳ ದೊಡ್ಡ ಸಮಸ್ಯೆಯಾಗಿದೆ. ಅದರೆ ವಿಪರ್ಯಾಸವೆಂದರೆ ರೈತರ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಸರ್ಕಾರಗಳು ವಿಫಲವಾಗಿದೆ. ರೈತರ ಪ್ರತಿಭಟನೆ ಹಾಗೂ ವಿಪಕ್ಷಗಳ ಟೀಕೆಗಳನ್ನು ನಿಯಂತ್ರಿಸಲು ಸಾಲಮನ್ನಾ ಎಂಬ ಮಾತು ಹೇಳಿ ಎಲ್ಲಾರ ಟೇಕೆಗಳನ್ನು ನಿಯಂತ್ರಿಸುತ್ತವೆ. ಅದರೆ ಪ್ರಸ್ತುತ ದಿನಗಳಲ್ಲಿ ರೈತರ ಆತ್ಮಹತ್ಯೆಯನ್ನು ತಡೆಯಲು ಸಾಲಮನ್ನಾ ಮಾತ್ರ ನಿಜವಾದ ಮಾರ್ಗವಲ್ಲ.

ರೈತರ ಆತ್ಮಹತ್ಯೆಯನ್ನು ತಡೆಯಲು ವಿವಿಧ ರೀತಿಯ ಮಾರ್ಗಗಳು:

  • ರೈತರಿಗೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿಯನ್ನು ಪಡೆಯುವ ವೈಜ್ಞಾನಿಕ ಕೃಷಿ ವಿಧಾನದ ಆಳವಡಿಕೆ
  • ರೈತರು ತಾವು ಬೆಳೆದ ಬೆಳೆಗೆ ಸೂಕ್ತ ಬೆಂಬಲ ಬೆಲೆ ಹಾಗೂ ಸೂಕ್ತ ಮಾರುಕಟ್ಟೆ
  • ರೈತರಿಗೆ ಸಕಾಲದಲ್ಲಿ ಬೀಜ ಹಾಗೂ ರಸಗೊಬ್ಬರಗಳ ವಿತರಣೆ.
  • ರೈತರ ಬೆಳೆಗಳಿಗೆ ಸೂಕ್ತ ವಿಮೆ ಸೌಲಭ್ಯ ಒದಗಿಸುವುದು.
  • ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸುವುದು.

ಈ ಎಲ್ಲಾ ಅಂಶಗಳನ್ನು ಸೂಕ್ತವಾಗಿ ಆಳವಡಿಸಿಕೊಂಡಾಗ ರೈತರ ಆತ್ಮಹತ್ಯೆಯನ್ನು ಯಶಸ್ವಿಯಾಗೆ ತಡೆಗಟ್ಟಬಹುದು.

Comments