ಬ್ರೇಕಿಂಗ್ ನ್ಯೂಸ್: ಜಿಯೋ ಟಿವಿ ಪ್ರೇಕ್ಷಕರಿಗೆ ಮತ್ತೋಂದು ಬಿಗ್ ಉಡುಗೊರೆ ನೀಡಿದ ರಿಲಯನ್ಸ್‌ ಜಿಯೋ!! ಯಾವ ಉಡುಗೊರೆ ಗೊತ್ತೇ?

ರಿಲಯನ್ಸ್‌ ಜಿಯೋ ತನ್ನ ಟೀವಿ ಪ್ರೇಕ್ಷಕರಿಗಾಗಿ ಹೊಸ ಸೆಟ್‌ ಟಾಪ್‌ ಬಾಕ್ಸ್‌ ಅನಾವರಣಗೊಳಿಸಿದೆ. ‘ಗಿಗಾ ಟೀವಿ’ ಎಂದು ಕರೆಯಲ್ಪಡುವ ಈ ಸೆಟ್‌ ಟಾಪ್‌ ಬಾಕ್ಸ್‌ ಟೀವಿ ಚಾನೆಲ್‌ಗಳನ್ನು 4000 ರೆಸೊಲ್ಯೂಶನ್‌ನಲ್ಲಿ ನೋಡಬಹುದು, ಅತ್ಯುತ್ಕೃಷ್ಟಗುಣಮಟ್ಟದ ದೃಶ್ಯಗಳನ್ನು ವೀಕ್ಷಿಸಬಹುದಾಗಿದೆ. 

‘ಭಾರತ ಏಕ್‌-ಭಾಷಾ ಅನೇಕ್‌’ ತತ್ವದ ಅಡಿಯಲ್ಲಿ ಈ ಸೇವೆ ನೀಡಲಾಗುತ್ತಿದು. 600 ಸಿನಿಮಾ ಚಾನೆಲ್‌ಗಳು ಲಭ್ಯವಿರಲಿದೆ. ಜತೆಗೆ ಸಾವಿರಕ್ಕೂ ಆಧಿಕ ಚಲನಚಿತ್ರಗಳು ಹಾಗೂ ಹಾಡುಗಳನ್ನು ಈ ಸೇವೆಯಡಿ ಪ್ರೇಕ್ಷಕರಿಗೆ ಕೊಡಮಾಡಲಾಗುತ್ತದೆ.
ರಿಲಯನ್ಸ್‌ ಜಿಯೋ ಸಿಮ್ ಬಳಕೆದಾರರಿಗೆ ಹೊಸ-ಹೊಸ ಬಿಗ್ ಅಫರ್ ಗಳನ್ನು ನೀಡುತ್ತಿರುವ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್‌ ಜಿಯೋ  ಈಗ ಟೀವಿ ಪ್ರೇಕ್ಷಕರಿಗೂ ಹೊಸ ಉಡುಗೊರೆ ಕಲ್ಪಿಸಿದೆ.

Comments