ಮೋದಿಯವರನ್ನು ಅಪ್ಪಿಕೊಂಡ "ಪಪ್ಪು"ವಿನ ಭಾವಚಿತ್ರ ಕಾಂಗ್ರ‍ೇಸ್ ಪಕ್ಷದ ಫ್ಲೆಕ್ಸ್ ಗಳಲ್ಲಿ ಪ್ರತ್ಯಕ್ಷ!!!!

ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆಯ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರನ್ನು ತಬ್ಬಿಕೊಂಡಿದ್ದರು. ಲೋಕಸಭೆಯಲ್ಲಿ ನಡೆದ ಈ ಬೆಳವಣಿಗೆ ಎಲ್ಲಾರ ಅಚ್ಚರಿಗೆ ಕಾರಣವಾಗಿತ್ತು. ಮಾತ್ರವಲ್ಲದೆ ಸ್ವತಃ ಕಾಂಗ್ರೇಸ್ ಪಕ್ಷವು ಇದರಿಂದಾಗಿ ಮುಜುಗರವನ್ನು ಅನುಭವಿಸುವಂತಾಗಿತ್ತು. ಅದರೆ ಈ ಮುಜುಗರವನ್ನು ತಪ್ಪಿಸಿಕೊಳ್ಳಲು  ಕಾಂಗ್ರ‍ೇಸ್ ಪಕ್ಷವು ತನ್ನ ಪಕ್ಷದ ಬ್ಯಾನರ್ ಮತ್ತು ಫ್ಲೆಕ್ಸ್ ಗಳಲ್ಲಿ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅಪ್ಪಿಕೊಂಡಿರುವ ಫೋಟೊವನ್ನು ಹಾಕಲಾಗಿದೆ. ಮಾತ್ರವಲ್ಲದೆ ’ಕೋಪದಿಂದಲ್ಲ, ಪ್ರೀತಿಯಿಂದ ಮಾತ್ರ ಗೆಲುವು ಸಾಧ್ಯ’ ಎಂಬ ಸಂದೇಶವನ್ನು ಮುದ್ರಿಸಲಾಗಿದೆ. ರಾಹುಲ್‌ ಗಾಂಧಿ ಅವರು ಮೋದಿ ಅವರನ್ನು ಅಪ್ಪಿಕೊಂಡಿರುವ ಚಿತ್ರವನ್ನು ಮುದ್ರಿಸಿ ದೊಡ್ಡ ಗಾತ್ರದ ಫ್ಲೆಕ್ಸ್‌ವೊಂದನ್ನು ಮುಂಬೈ ಕಾಂಗ್ರೆಸ್‌ ಪಕ್ಷದ ಸಾರ್ವಜನಿಕ ಸ್ಥಳದಲ್ಲಿ  ಈ ಪ್ಲೆಕ್ಸ್‌ ಹಾಕಿಸಲಾಗಿದೆ.
ಪಕ್ಷಕ್ಕೆ ಅದ ಮುಜುಗರವನ್ನು ತಪ್ಪಿಸಿಕೊಳ್ಳಲು ಈ ರೀತಿ ಮಾಡಲಾಗಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ

Comments