ಬ್ರೇಕಿಂಗ್ ನ್ಯೂಸ್: ಕೆಂಪುಕೋಟೆಯಲ್ಲಿ ದೇಶದ ಪ್ರಗತಿಯ ಪುಟವನ್ನು ಬಿಚ್ಚಿಟ್ಟ ನರೇಂದ್ರ ಮೋದಿ!!! ಮೋದಿಯವರ ಈ ಬಾರಿಯ ಭಾಷಣದ ವಿಶೇಷ ಗೊತ್ತೆ??
72ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಪ್ರಧಾನ ನರೇಂದ್ರ ಮೋದಿ ದೇಶದ ಜನರನ್ನು ಕುರಿತು ಮಾತನಾಡಿದರು.
ದೇಶವಾಸಿಗಳಿಗೆ 72ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ತಿಳಿಸಿದ ಪ್ರಧಾನಿ ಮೋದಿಯವರು, ದೇಶ ಆತ್ಮ ವಿಶ್ವಾಸದಲ್ಲಿದ್ದು, ಹೊಸ ಕನಸು ಹಾಗೂ ಉತ್ಸಾಹದೊಂದಿಗೆ ಮುನ್ನಡೆಯುತ್ತಿದೆ. ಈ ಬಾರಿಯ ಕಲಾಪಗಳು ಸುಗಮವಾಗಿ ನಡೆದು ಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು. ವಿಶ್ವದ 6 ಅತಿ ದೊಡ್ಡ ಆರ್ಥಿಕ ವ್ಯವಸ್ಥೆ ಹೊಂದಿರುವ ರಾಷ್ಟ್ರಗಳಲ್ಲಿ ಭಾರತ ಸಹ ಒಂದಾಗಿದೆ ಎಂದು ತಿಳಿಸಿದರು. ದೇಶದ ಹಲವು ರಾಜ್ಯಗಳಲ್ಲಿ ನಿರಂತರವಾಗಿ ಉತ್ತಮ ಮಳೆಯಾಗುತ್ತಿದ್ದು, ಪ್ರವಾಹ ಪೀಡಿತ ರಾಜ್ಯಗಳೊಂದಿಗೆ ಇಡೀ ದೇಶವೇ ಇದೆ ಎಂದು ಹೇಳಿದರು.
72 ನೇ ಸ್ವಾತಂತ್ರ್ಯ ದಿನಾಚರಣೆಯನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ಭಾಷಣದಲ್ಲಿ ತಮಿಳು ಮಾತನಾಡಿ ಅಚ್ಚರಿ ಮೂಡಿಸಿದ್ದಾರೆ. ತಮಿಳುನಾಡಿನ ಶ್ರೇಷ್ಠ ಸಾಹಿತಿ ಸುಬ್ರಹ್ಮಣ್ಯ ಭಾರತಿ ಅವರನ್ನು ಉಲ್ಲೇಖಿಸಿರುವ ಪ್ರಧಾನಿ ನರೇಂದ್ರ ಮೋದಿ, ತಮಿಳಿನಲ್ಲಿ ಮಾತನಾಡಿದ್ದು, "ಭಾರತ ಶ್ರೇಷ್ಠ ರಾಷ್ಟ್ರವಾಗಷ್ಟೇ ಉದಯಿಸುವುದಿಲ್ಲ, ಅನ್ಯರಿಗೆ ಸ್ಪೂರ್ತಿ ನೀಡುವ ರಾಷ್ಟ್ರವೂ ಆಗಿರುತ್ತದೆ" ಎಂದು ಭಾರತಿ ಅವರು ಬರೆದಿದ್ದರು. ಅವರು ಹೇಳಿದಂತೆ ಭಾರತ ಇಡೀ ವಿಶ್ವಕ್ಕೇ ಎಲ್ಲಾ ಸಂಕೋಲೆಗಳಿಂದ ಹೊರಬರುವುದಕ್ಕೆ ಮಾರ್ಗದರ್ಶನ ಮಾಡಲಿದೆ ಎಂದು ಮೋದಿ ಹೇಳಿದ್ದಾರೆ. ಮೋದಿ, ಕೆಂಪುಕೋಟೆಯಲ್ಲಿ ತಮಿಳುನಾಡಿನ ಶ್ರೇಷ್ಠ ಸಾಹಿತಿ ಸುಬ್ರಹ್ಮಣ್ಯ ಭಾರತಿ ಅವರನ್ನು ಉಲ್ಲೇಖಿಸುವುದೂ ಅಲ್ಲದೇ ತಮಿಳಿನಲ್ಲೇ ಕವನ ಓದಿ ಅಚ್ಚರಿ ಮೂಡಿಸಿದ್ದಾರೆ.
ಆಯುಷ್ಮಾನ್ ಯೋಜನೆ ಅಡಿಯಲ್ಲಿ ಪ್ರಧಾನಮಂತ್ರಿ ಜನ್ ಆರೋಗ್ಯ ಅಭಿಯಾನ ಆರಂಭಿಸಲಾಗುವುದು. ಈ ಯೋಜನೆಯಿಂದ 10 ಕೋಟಿ ಕುಟುಂಬಳ ಸುಮಾರು 50 ಕೋಟಿ ಜನರಿಗೆ ಪ್ರಯೋಜನವಾಗಲಿದೆ ಎಂದರು. ಗಂಭೀರ ರೋಗಗಳಿಗೆ ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯಲಿದೆ.
2014ರಲ್ಲಿ ಜನರು ಕೇವಲ ಸರ್ಕಾರ ರಚಿಸಿ ಸುಮ್ಮನೆ ಕುಳಿತಿರಲಿಲ್ಲ. ದೇಶದ ರಚನೆಗಾಗಿ ಸರ್ಕಾರದ ಜೊತೆ ನಿರಂತರವಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ, ಮುಂದಿನ ದಿನಗಳಲ್ಲಿ ಇದು ಹೀಗೆ ಮುಂದುವರಿಯಲಿದೆ. ಇದು ನಮ್ಮ ದೇಶದ ಸುಂದರತೆ ಎಂದು ನುಡಿದರು. ಕಳೆದ 4 ವರ್ಷಗಳಲ್ಲಿ ನಡೆದಿರುವ ಪ್ರಗತಿ ಕೆಲಸಗಳನ್ನು ನೋಡಿದರೆ ದೇಶದ ಅಭಿವೃದ್ಧಿ ಹೇಗೆ ನಡೆಯುತ್ತಿದೆ ಎಂಬುವುದು ನಿಮಗೆ ತಿಳಿಯಲಿದೆ.
2013ರಲ್ಲಿದ್ದ ಸರ್ಕಾರದ ರೀತಿಯ ವೇಗದಲ್ಲಿ ನಾವು ಕೆಲಸಗಳನ್ನು ಮಾಡಿದ್ದಾರೆ ಇಂದು ಆಗಿರುವ ಸಾಧನೆಗೆ ದಶಕಗಳೇ ಬೇಕಾಗಿತ್ತು. 2013ರಲ್ಲಿ ಇದ್ದ ದೇಶದ ಸ್ಥಿತಿ ಇಂದಿಲ್ಲ. ದೇಶದ ನಗರಗಳಲ್ಲಿ ಸ್ಟಾರ್ಟ್ ಅಪ್ ಆರಂಭವಾಗಿದೆ. ದೇಶದ ಆಧುನಿಕತೆ ವಿಜ್ಞಾನದತ್ತ ಸಾಗುತ್ತಿದ್ದು, ಗ್ರಾಮ ಗ್ರಾಮಗಳು ಡಿಜಿಟಲೀಕರಣಕ್ಕೆ ಒಳಪಡುತ್ತೀವೆ. ಏಕ ಶ್ರೇಣಿ, ಏಕ ವೇತನ ಮೂಲದ ನಿವೃತ್ತ ಯೋಧರ ಬೇಡಿಕೆಗಳನ್ನು ಈಡೇರಿಸಿದ್ದೇವೆ. ಜಿಎಸ್‍ಟಿ ಜಾರಿ ಮೂಲಕ ಏಕರೂಪದ ತೆರಿಗೆಯನ್ನು ಜಾರಿಗೆ ತರಲಾಗಿದೆ. ಬೇನಾಮಿ ಆಸ್ತಿಗಾಗಿ ಹೊಸ ಹೊಸ ತಂತ್ರಗಳನ್ನು ರಚಿಸಿ ಭ್ರಷ್ಟರನ್ನು ನಿರ್ನಾಮ ಮಾಡಲಾಗುತ್ತಿದೆ. ಈ ಮೊದಲು ಪತ್ರಿಕೆಗಳಲ್ಲಿ ಭಾರತ ಆರ್ಥಿಕ ಸಂಕಷ್ಟದಲಿದೆ ಎಂದು ವರದಿಯಾಗುತ್ತಿತ್ತು ಅದರೆ ನಮ್ಮ ಸರ್ಕಾರದ ಅವಧಿಯಲ್ಲಿ ಅಂತಹ ಸುದ್ದಿಯಾಗದಿರುವುದು ನಮ್ಮ ಸರ್ಕಾರದ ಹೆಮ್ಮೆ ಎಂದರು.
ಭಾರತ ಮಲ್ಟಿ ಬಿಲಿಯನ್ ಡಾಲರ್ ಹೂಡಿಕೆ ಸ್ಥಳವಾಗಿದೆ. ಮಲಗಿದ್ದ ಆನೆ ಇಂದು ಎಚ್ಚರಗೊಂಡು ಓಡುತ್ತಿದೆ ಎಂದು ವಿಶ್ವದ ಆರ್ಥಿಕ ತಜ್ಞರು ಹೇಳುತ್ತಿದ್ದಾರೆ. ವಿಶ್ವದ ಉನ್ನತ ಸಂಸ್ಥೆಗಳು ಭಾರತದ ಬಗ್ಗೆ ಧನಾತ್ಮಕವಾಗಿ ಮಾತನಾಡುವಂತೆ ದೇಶದ ಆರ್ಥಿಕ ವ್ಯವಸ್ಥೆ ಬದಲಾಗಿದೆ. ಜಾಗತಿಕವಾಗಿ ಭಾರತವನ್ನು ನೋಡುವ ದೃಷ್ಟಿಕೋನ ಬದಲಾಗಿದೆ. 2022ರಲ್ಲಿ ಸ್ವಾತಂತ್ರದ 75ನೇ ವರ್ಷಾಚರಣೆಯಲ್ಲಿ. 2022ರಲ್ಲಿ ದೇಶದ ರೈತರ ಆದಾಯವನ್ನು ದ್ವಿಗುಣಗೊಳಿಸುವಂತ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಬಲತ್ಕಾರ ಮಾಡುವ ರಾಕ್ಷಸ ಮನೋವೃತ್ತಿಗೆ ಅಂತ್ಯ ಹಾಡಬೇಕಿದೆ. ಅತ್ಯಾಚಾರ ಪ್ರಕರಣಗಳಲ್ಲಿ ಗಲ್ಲು ಶಿಕ್ಷೆಗೆ ಒಳಾಗದವರ ಬಗ್ಗೆ ಪ್ರಚಾರಗೊಳಿಸಬೇಕಿದೆ. ರಾಕ್ಷಸ ಮನೋವೃತ್ತಿಯ ಅಂತ್ಯಗೊಳಿಸಲು ನಾವೆಲ್ಲರೂ ಪಣ ತೊಡಬೇಕಿದೆ ಎಂದರು. ಮುಸ್ಲಿಂ ಹೆಣ್ಣು ಮಕ್ಕಳಿಗಾಗಿ ತ್ರಿವಳಿ ತಲಾಖ್ ಹಾಗೂ ಇನ್ನಿತರ ವಿಶೇಷ ಕಾನೂನು ತರಲು ನಾವು ಸತತ ಪ್ರಯತ್ನ ಮಾಡುತ್ತಿದ್ದೇವೆ ಎಂದು ಭರವಸೆ ನೀಡಿದರು.

Comments
Post a Comment