ಬಿಗ್ ಬ್ರೇಕಿಂಗ್ ನ್ಯೂಸ್: ಮುಂದಿನ ಹತ್ತು ದಿನಗಳಲ್ಲಿ ಕಪ್ಪು ಹಣ ಹೊಂದಿರುವವರ ಬಗ್ಗೆ ಅಧಿಕೃತ ಮಾಹಿತಿ. ತೆರಿಗೆಗಳ್ಳರಿಗೆ ಬಿಗ್ ಶಾಕ್ ಕೊಟ್ಟ ಮೋದಿ ಸರ್ಕಾರ!!!!!


ಮೋದಿ ಸರ್ಕಾರವನ್ನು ವಿರೋದಿಗಳು ಮತ್ತೆ-ಮತ್ತೆ ಕೇಳುತ್ತಿರುವುದು ಕೇವಲ ಒಂದೇ ಪ್ರಶ್ನೆ ಅದು ವಿದೇಶಿ ಬ್ಯಾಂಕುಗಳಲ್ಲಿನ ಕಪ್ಪು ಹಣದ ಮಾಹಿತಿ. ಮೋದಿ ಸರ್ಕಾರ ಇದಕ್ಕಾಗಿ ಸತತ ಪ್ರಯತ್ನ ಮಾಡಿದರು ಗಮನಾರ್ಹವಾದ ಪ್ರಗತಿ ಕಾಣಲು ಸಾಧ್ಯವಾಗಿಲ್ಲ. ಅದರೆ ಈಗ ಬಂದಿರುವ ಮಾಹಿತಿಯನ್ನು ನೋಡಿದರೆ ವಿರೋಧಿಗಳು ತಮ್ಮ ಬೆರಳನ್ನು ಮೂಗಿನ ಮೇಲೆ ಇಡುವಂತಾಗಿದೆ. ಹೌದು ಪ್ರಧಾನಿ ನರೇಂದ್ರ ಮೋದಿಯವರು ಕಪ್ಪು ಹಣದ ವಿಷಯದಲ್ಲಿ ಯಶಸ್ಸನ್ನು ಕಾಣುವಂತಾಗಿದೆ. ತೆರಿಗೆವಂಚಿಸಿ ವಿದೇಶದ ಬ್ಯಾಂಕುಗಳಲ್ಲಿ ಠೇವಣಿ ಇಟ್ಟಿರುವವರ ಮಾಹಿತಿ ಇನ್ನು ಮುಂದಿನ ಹತ್ತು ದಿನಗಳಲ್ಲಿ ಬಹಿರಂಗಗೊಳ್ಳಲಿದೆ ಎಂದು ಕೇಂದ್ರ ಹಣಕಾಸು ಸಚಿವ ಪೀಯೂಸ್ ಗೋಯಲ್ ಮಾಹಿತಿ ನೀಡಿದ್ದಾರೆ. ರಾಜ್ಯಸಭೆಯಲ್ಲಿ ಕಪ್ಪು ಹಣದ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು ಈ ಮಾಹಿತಿ ನೀಡಿದ್ದಾರೆ.

ಸ್ವಿಸ್ ಬ್ಯಾಂಕಿನ ಅಧಿಕಾರಿಗಳು ಎಚ್.ಎಸ್.ಬಿ.ಸಿ ಖಾತೆಗಳ ಮಾಹಿತಿಯನ್ನು ಮುಂದಿನ ಒಂದು ವಾರಗಳಲ್ಲಿ ಅಥವಾ ಹತ್ತು ದಿನಗಳ ಒಳಗಾಗಿ ಭಾರತಕ್ಕೆ ನೀಡಲಿದ್ದಾರೆ. ಈ ಬಗ್ಗೆ ಸ್ವಿಜರ್ಲ್ಯಾಂಡ್ ಸರ್ವೋಚ್ಚ ನ್ಯಾಯಾಲಯ ಬ್ಯಾಂಕುಗಳಿಗೆ ಆದೇಶವನ್ನು ಜಾರಿ ಮಾಡಿದ್ದು, ಎಚ್.ಎಸ್.ಬಿ.ಸಿ ಖಾತೆಗಳ ಮಾಹಿತಿಯನ್ನು ಭಾರತದ ಜೊತೆ ಹಂಚಿಕೊಳ್ಳಬೇಕು ಎಂದು ಸಂದೇಶ ರವಾಸಿದೆ. ಕೋರ್ಟಿನ ಆದೇಶದಂತೆ ಮುಂದಿನ ಹತ್ತು ದಿನಗಳಲ್ಲಿ ಮಾಹಿತಿ ಭಾರತ ಸರ್ಕಾರದ ಕೈ ಸೇರಲಿದೆ ಎಂದು ಪೀಯೂಸ್ ಗೋಯಲ್ ವಿಶ್ವಾಸ ವ್ಯಕ್ತಪಡಿಸಿಸಿದ್ದಾರೆ. 

2014ರಿಂದ ಭಾರತ ಸರ್ಕಾರ ಮಾಹಿತಿಗಾಗಿ ಬಹಳಷ್ಟು ಭಾರೀ ಸ್ವಿಸ್ ಸರ್ಕಾರವನ್ನು ಕೇಳಿತ್ತಾದರು ಗೌಪ್ಯತೆಯ ಕಾರಣ ನೀಡಿ ಯಾವುದೇ ಮಾಹಿತಿ ಬಹಿರಂಗಪಡಿಸಲ್ಲಿಲ್ಲ. ಅದರೆ ಈ ಭಾರೀ ಕೋರ್ಟಿನ ಆದೇಶದಂತೆ ಮಾಹಿತಿ ನೀಡಲಿದೆ. ಕಪ್ಪು ಹಣದ ವಿರುದ್ದದ ಹೋರಾಟಕ್ಕೆ ಪ್ರಧಾನಿ ಮೋದಿ ಸರ್ಕಾರಕ್ಕೆ ಸಿಕ್ಕ ದೊಡ್ಡ ಗೆಲುವು ಎಂದು ಬಣ್ಣಿಸಲಾಗುತ್ತಿದೆ. ಮಾತ್ರವಲ್ಲದೆ ಸದ್ಯ ತೆರಿಗೆಗಳ್ಳರಿಗೆ ನಡುಕ ಶುರುವಾಗಿದೆ.

Comments